Thursday, June 28, 2012

Ocean of Books - Mr. Anke Gowda's Books Empire - Bird View 23.06.12


People says 
"Knowledge is power..."
"Power is Money..."
"Collect it, share it, utilize it to the optimum..."
"Money will be floating everywhere..."

On 23rd June 2012 morning..I witnessed a rare phenomena in my life ...A greatest human being I ever met in my life..studied the above lines in the reverse order...

"Money will be floating everywhere..."
"Collect it, share it, utilize it to the optimum..."
"Power is Money..."
"Knowledge is power... "

He had the habit of collecting the books, and distributing among his bunch of best friends. One fine day his "masterly" teacher advised him "If you want to do anything..collect the books"..those words fell on the ears like a humming musical note.  


Then started the journey of collecting the books..

He started on a small scale..and then the scale lost its size..and started growing in size...he utilised all his savings, earnings, and his property to buy the books, and preserve it for the generation.  Now the count of the books crossed more than two lakhs, and still the count is on...



You name the book, or subject, you will see the book in your hands in a jiffy.  Any book under the sun you can get it here for reference.  That kind of ocean of books i had never seen in my life, probably never again.



Point to be noted, this is not any government, or private or public funded library, it is owned, and maintained by Mr. Anke Gowdaru with the help of genuine politicians of his area, and one of the businessman.
Mr. Anke Gowda front of his Empire - Pustakada Mane


It is not a small effort to be ignored, the information about this effort needs to be spread across in our society not only to make it a popular site, but the effort to be recognised, and preserved, and also to be utilised in an useful manner for the generation to come.

The Address can be found below :

Sri. Anke Gowdaru
Sri Anke Gowda Jnaana Pratishtaana (Regd)
Pustakada Mane
Vishweshwara Nagara
Harala Halli
Paandavapura Tq.
Mandya - 571 434
Cell # 9242844934 ,9242844206

Common friends what for you all waiting for, any weekends just zip on the mysore road, visit this temple of books, and spread the fragrance of efforts of the  sandalwood man across the globe...

Wednesday, June 27, 2012

ಸಾಗರ ಪುಸ್ತಕದ ಸಾಗರ...ಶ್ರೀಮಾನ್ ಅಂಕೆ ಗೌಡರ ಪುಸ್ತಕದ ಸಾಮ್ರಾಜ್ಯ ಒಂದು ಪಕ್ಷಿ ನೋಟ (23.06.12)


 ಭೂಮಿಯ ಸಂಪರ್ಕ ಕಡಿದುಕೊಂಡ ನಂತರ  ಅಲೆಗ್ಸಾಂಡರ್ ಸ್ವರ್ಗ ಲೋಕದಲ್ಲಿ ಓಡಾಡುತಿರುವಾಗ..ಒಂದು ಅಶರೀರವಾಣಿ ನುಡಿಯುತ್ತೆ.."ಮಗು ಅಲೆಗ್ಸಾಂಡರ್...ಸುಮ್ಮನೆ ಪ್ರಪಂಚವನ್ನೆಲ್ಲ ಜಯಿಸಲು ಹೋಗಿ ನಿನ್ನ ಶ್ರಮ ವ್ಯರ್ಥ ಮಾಡಿದೆ...ಜಗತನ್ನು ಜಯಿಸುವ ಬದಲು ಜಗತ್ತಿನ್ನಲಿರುವ ವಿಷಯಗಳನ್ನೆಲ್ಲ ತಿಳಿದುಕೋ  ..." 

"ಜಗತಿನಲ್ಲಿರುವ ವಿಷಯಗಳೆಲ್ಲ ಒಂದೇ ಕಡೆ ಎಲ್ಲಿ ಸಿಗುತ್ತದೆ..?"

ತಟ್ಟಂತೆ ಬಾಣದ ಹಾಗೆ ಬಂತು ಉತ್ತರ..."ಈ ಕೆಳಕಂಡ ವಿಳಾಸಕ್ಕೆ ಹೋಗು ಸಿಗುತ್ತದೆ..."
ಶ್ರೀಮಾನ್ ಅಂಕೆ ಗೌಡರು

ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] 
ಪುಸ್ತಕದ ಮನೆ
ವಿಶ್ವೇಶ್ವರ ನಗರ
ಹರಳ ಹಳ್ಳಿ
ಪಾಂಡವಪುರ ತಾಲೂಕು
ಮಂಡ್ಯ - 571434
ದೂರವಾಣಿ :  9242844934 ,9242844206





"ಈ ವಿಳಾಸದಲ್ಲಿರುವ ಶ್ರೀ ಅಂಕೆ ಗೌಡರು ತಮ್ಮ ವಿಸ್ಮಯವಾದ ಹವ್ಯಾಸವನ್ನು ಸದಭಿರುಚಿಯ ಜನತೆಗೆ ತಮ್ಮ ತನು ಮನ ಧನ ಎಲ್ಲವನ್ನು ಮನಸಾರೆ ಅರ್ಪಿಸಿದ್ದಾರೆ..."

"ಶಿವ ಪಾರ್ವತಿಯನ್ನು ನೋಡಲು ಕೈಲಾಸ ನೋಡಬೇಕೆಂದರೆ ಹಿಮಾಲಯ ಶ್ರೇಣಿಗಳಲ್ಲಿರುವ  ಸಿಗುತ್ತದೆ ಮಾನಸ ಸರೋವರ ಸಿಗುತ್ತದೆ.."
"ಮಹಾಲಕ್ಷಿ-ಮಹಾವಿಷ್ಣುವನ್ನು ನೋಡಲು ವೈಕುಂ ನೋಡಬೇಕೆಂದರೆ  ಪ್ರತಿ ವರುಷ ವೈಕುಂಠ ಏಕಾದಶಿ ದಿವಸ ಪ್ರತಿ ವಿಷ್ಣು/ಶ್ರೀರಾಮ/ವೆಂಕಟೇಶ್ವರ/ಕೃಷ್ಣ ದೇವಾಲಯಗಳಲ್ಲಿ ಕಾಣ ಸಿಗುತ್ತದೆ.."
"ಬ್ರಹ್ಮನನ್ನು ನೋಡುವುದೇ ಬೇಡ ಯಾಕೆಂದರೆ ನಮ್ಮ ಭಾರತ ದೇಶದಲ್ಲಿ ಅವನ ಸೃಷ್ಟಿಯೇ ಅಪಾರ..."
"ಉಳಿಯುವುದು ಸರಸ್ವತಿ ಲೋಕ..ಬನ್ನಿ ಇಲ್ಲಿ ಸಿಗುತ್ತದೆ.."

"ನೋಡಿದಲ್ಲಿ ಸರಸ್ವತಿಯ ಸಾಕ್ಷತ್ಕಾರವಾಗುತ್ತದೆ..ಸರಸ್ವತಿ ಪುತ್ರರಾದ ಹಾಗು ಸರಸ್ವತಿ ಆರಾಧಕರಾದ ಶ್ರೀಮಾನ್ ಅಂಕೆ ಗೌಡರ ಲೋಕ ನಿಧಾನವಾಗಿ ತೆರೆದುಕೊಳ್ಳುತ್ತೆ.."

ಅಲೆಗ್ಸಾಂಡರ್ ನೋಡುತ್ತಾ ಹೋದಾ ಹಾಗೆ ಪುಸ್ತಕ ಲೋಕ ತನ್ನ ಮನವನ್ನು ತೆರೆದುಕೊಳ್ಳುತ್ತಾ ಹೋಯಿತು..


ಮುಂದೆ ನೋಡಿ ಪುಸ್ತಕ ಲೋಕ ತನ್ನ ಪರಿಚಯವನ್ನು ತಾನೇ ಮಾಡಿಕೊಳ್ಳುತ್ತ ಹೋಗುತ್ತದೆ......

ಇದು ಪುಸ್ತಕ ಲೋಕ..ನೀವು ಕೇಳಿದ ವಿಷಯ, ನೋಡಬೇಕಾದ ಪುಸ್ತಕ, ಏನೇ ಇದ್ದರು ಒಂದು ಚೂರು ಬೇಸರಿಸದೆ ಈ ಮಹಾನುಭಾವರು ತಂದು ಕೊಡುತ್ತಾರೆ..ಅತ್ಯಂತ ಬೆಲೆ ಬಾಳುವ ಪುಸ್ತಕದಿಂದ ಹಿಡಿದು, ಅಭೂತ ಪೂರ್ವ, ಅನರ್ಘ್ಯ ರತ್ನಗಳಂತ ಪುಸ್ತಕಗಳು ಇಲ್ಲಿವೆ...

ಮೊದಲನೇ ಪ್ರತಿಗಳು, ಮೊದಲ ಪ್ರಕಾಶನವಾದ ನಿಯತ ಕಾಲಿಕಗಳು, ನಿಮಗೇನು ಬೇಕು..ಸಿಗುತ್ತದೆ...

ಪಟ್ಟಿ ಉದ್ದ ಮಾಡುವ ಮೊದಲು ನನ್ನ ಜನುಮದಾತರಾದ ಶ್ರೀಮಾನ್ ಅಂಕೆ ಗೌಡರ ಒಂದು ಪರಿಚಯ..ನಿಮಗಾಗಲೇಬೇಕು...
ವಿದ್ಯೆ ಹೇಳಿಕೊಟ್ಟ ಗುರುಗಳ ಒಂದು ಚಿಕ್ಕ ಮಾತು ಚಿಕ್ಕ ಸಾಹಸ ಮುಂದೆ ಒಂದು ಬೃಹತ್ ಸಾಧನೆಯಾಗಿ ಪರಿವರ್ತಿತವಾಯಿತು...
ಅವರು ನಂಬಿದ್ದು ಒಂದೇ ಸಿದ್ದಾಂತ..ತಾಳಿದವನು ಬಾಳಿಯಾನು...

ಮುಂದೆ ಅವರು ನಡೆದದ್ದೇ ಗಜ ಮಾರ್ಗವಾಯಿತು.

.ಅಡೆತಡೆಗಳು ಏನೇ ಬಂದರು ನಿಭಾಯಿಸಿಕೊಂಡು ಮುನ್ನುಗ್ಗಿದರು...ಇವರ ಸಾಹಸದ ಹಿಂದೆ ಬೆಂಗಾವಲಾಗಿ, ಸ್ಪೂರ್ತಿಯಾಗಿ ಇವರ ಸಹಧರ್ಮಿಣಿ ಇವರ ಪ್ರತಿಹೆಜ್ಜೆಯಲ್ಲೂ ತನ್ನ ಹೆಜ್ಜೆಯನ್ನು ಸೇರಿಸಿದರು...


ಪಲಿತಾಂಶ ಒಂದು ಬೃಹತ್ ಪುಸ್ತಕದ ಲೋಕ...

ಅರೆ ಅರೆ..ಇಂತಹ ಪುಸ್ತಕ ಕಡಲು ನಮ್ಮ ಕರ್ನಾಟಕದಲ್ಲಿ  ಇದೆಯೇ ಎಂದು ಅಚ್ಚರಿಯಾಗುತ್ತಿದೆಯೇ...ಖಂಡಿತ ಇದೆ ...ನೋಡಬೇಕೆನ್ನುವ ತವಕ ಹೆಚ್ಹಾಗುತಿದೆಯೇ......ಹೌದೇ!!!!!! 








ಹಾಗಾದರೆ  ನೀವು ನಿಮ್ಮ ಸ್ನೇಹಿತರನ್ನು, ಕುಟುಂಬದವರನ್ನು ಕರೆದು ತನ್ನಿ.  ಇವರ ಬಗ್ಗೆ ಹಾಗು ಪುಸ್ತಕದ ಮನೆಯ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ಮಾಡಿ. 

ಶ್ರೀಮಾನ್ ಅಂಕೆ ಗೌಡರು ಬಯಸುವುದು, ತಮ್ಮ ಜೀವನದ ಉದ್ದಕ್ಕೂ ಗಳಿಸಿದ ಧನವನೆಲ್ಲ ತಮ್ಮ ಹವ್ಯಾಸಕ್ಕೆ.ಹಾಗು ನಂತರದ ಪೀಳಿಗೆಗೆ  ಕೂಡಿಟ್ಟಿರುವ,  ಈ ಜ್ಞಾನ ಸಂಪತ್ತಿನ ಸದ್-ವಿನಿಯೋಗ...ಆಗಲೇ ಅವರು ಈ ಹವ್ಯಾಸವನ್ನು ಇನ್ನಷ್ಟು ಬೆಳೆಸಿಕೊಂಡು, ಉಳಿಸಿಕೊಂಡು, ಸಂರಕ್ಷಿಸಿಕೊಂಡು ಇರಲು ಕಾರಣವಾಗುತ್ತದೆ..ನನ್ನನ್ನು ಕಾಪಾಡಲು ಆಗುವುದು .ಏನಂತೀರ ಗೆಳೆಯರೇ...

ಬನ್ನಿ ವಾರಾಂತ್ಯದಲ್ಲಿ ಆರಾಮಾಗಿ ಬೇಟಿ ನೀಡಬಹುದಾದ ಹಾಗು ಬೆಂಗಳೂರಿಗೆ ಕೇವಲ ನೂರು-ನೂರಿಪ್ಪತ್ತು ಕಿ.ಮಿ. ದೂರದಲ್ಲಿರುವ ಜ್ಞಾನ ದೇಗುಲಕ್ಕೆ ಹೋಗೋಣ..ಕೈ ಮುಗಿಯೋಣ...

ಪೂರ ಮಾಹಿತಿಗಾಗಿ ಈ ಕೆಳಕಂಡ ಲಿಂಕನ್ನು ನಿಮ್ಮ ಬಲಗೈ ಇಂದ ಕ್ಲಿಕ್ ಮಾಡಿ..ಶುಭಾರಂಭ ಮಾಡಿ...ಡೈರಿ ಮಿಲ್ಕ್ ಚಾಕ್ಲೆಟ್ ಜೊತೆ :-)
ಈ ಲೋಕವನ್ನು ನಮಗೆ ಪರಿಚಯಿಸಿದ ಬಾಲು ಸರ್ ಅವರ ಒಂದು ಲೇಖನ..ಪುಸ್ತಕ ಲೋಕದ ಒಂದು ಪರಿಚಯ

ಅಲೆಗ್ಸಾಂಡರ್ ಕಣ್ಣಿಂದ ಆನಂದ ಭಾಷ್ಪ ಉರುಳಿತು...

"ಓಹ್ ಲಾರ್ಡ್..ನಾನು ಭಾರತ ದೇಶಕ್ಕೆ ಬಂದು ದಂಡಯಾತ್ರೆ ಮಾಡಿ ತಪ್ಪು ಮಾಡಿದೆ..ಪುಸ್ತಕದ ಮನೆ ಇರುವಂತಹ ನಾಡಿನಲ್ಲಿ ಮುಂದಿನ ಜನುಮಗಳಲ್ಲಾದರೂ  ಹುಟ್ಟುವ ಸೌಭಾಗ್ಯ ಕೊಟ್ಟುಬಿಡು ಲಾರ್ಡ್..." 

Monday, June 25, 2012

On the winding path of Laughter - A Trip to Kari Ghatta - Srirangapattana with Bloggers 23.06.12

When positive energies are hovering on our head…just spread yourself....to get energized…that is the lesson to be learnt…!!!!

Sometimes…just one click…..can click your life…It was one such click on a facebook post by Prakash Hegde…immediately a pop message came  in..”please come for the trip..we will be happy…”…surely sirji..”will tell you by tomorrow…was my answer”…since my blood is B+ve..my answer was also………

The 32 seater was zipping on the mysore road towards Srirangapattana – Kari Betta (Black hill)…A booming voice announced that a intro program…one by one in a sequence showed their teeth..and spelled out their name, fame, game….since every one of us using the Bluetooth technology….showing the whiteteeth and becoming friends was never a great task…

The easiest means of communication to transfer the files are “whitetooth”…just show the teeth…your profile in the public domain will get added up with a friends request…

By the time we reached Kari Ghatta ..the temple was still open…probably waiting for us…here the temple is dedicated to the lord venkateshwara..aka "venki"


After a quick darshan, and a brief intro on the temple by our effervescent, and knowledge bank Balu Sir, we rushed to reserve our seats for the fight..meaning fight between hand and mouth…

The temple is about 120Kms from Bangalore near Srirangapattana.  And the temple atop the hill with a steps about 550, but vehicle will go till the top.  This temple is about 200+ years old, and as any hindu temple also blossomed under various kings and kingdoms…



The lunch was delicious one..thanks to Balu Sir, the food was entering our stomach with out any red signal!!!!!!

Now the time for some fun factor..The bloggers had kept the best moments in a small open air theatre atop the hill..

Slowly..a swamiji was in the making..he updated his costume and his name was “Chandananda swamiji” making a mockery of Astrology.  One by one question rolled out from the “devotees” ..the every answer from the swamiji made the devotees to visit www.mouthshut.com and www.closeup-ad.com .
Aasha Bhaabhi on the costume design!!!

What to Say!!! The "bundle" of Talent - Prakash Hegde - The Master Mind!!!!
Shivu jumped out of the bandwagon, and anchored a superb game show. 
The theme of the game is “Love is a very small word in the big world”
“when we tried to hold in the hands it just spills out”…
“try to capture slips out..try to keep it..drains out”
“..but try to balance it..it lives for ever….”
Master Guru & Handsome Girish on the Balley!!!!

The ploy is to balance the ball by using the forehead’s with out touching the ball with the hands …slightly give a gentle tap dancing when the music is playing around…the balancing act should go on till the music stops…

Shivu’s analysis was super…in the beginning seems to be a easy task..but after few seconds it will becomes a tougher task..but keep the initial phase on the hooks..concentrate..then slowly..you can speak, you can laugh..you can exchange jokes..but the ball will never fall..

Like was love in the initial phase easy to handle..but difficult to manage..slowly when you know what is the ploy is all about…you start building the love with care and affection..

A Royal Salute to the craftsman Shivu…
Shivu The live wire!!!

The came one more banger…”Guru”..he opened out new games like, analyse the pictures and answer…..this brought out creative juices in all of us..
Operation Master - Guru!!!!

The theme again..The object, image or the project will look difficult..but careful observation, analysis can get you out of the doom..very good game indeed..

The next game in the form of holding the hands in crossed equation to form a human chain in a circle..and in one go..turn around without breaking the chain..

When everyone works for a project. symmetry is what it requires all the way..

 The final game for the day…build a tallest structure with the straws.  Three team worked out all the tricks in the trade by understanding the essence of the project and requirement as well.

Team building strategy will get exploded here..superb piece of games..

Guru the perfect Ops. Manager…

The day ended with a memento for everyone..

There was close to 30 people in the trip there was not even a single second of dullness. Everyone pitching themselves with one or the other activity, and enjoying the spirit of the team game…superb..

The whole trip was executed to the perfection by Prakash Hegde, Baalu Sir, Azaad Sir, Shivu , Mahesh, Naveen, Girish and the team
Azaad Sir - The Specialist, Baalu Sir - Energetic, Umesh  Sir - The Poetical Guru!!!

Naveen - Smiling Beauty!!!
Eagerly waiting for the next sojourn with the world of bloggers… 

Sunday, June 24, 2012

ಗಾಡಿಯಲ್ಲಿ ಜಾತ್ರೆ ...ಕರಿ ಬೆಟ್ಟಕ್ಕೆ ಯಾತ್ರೆ ...www@ಬಜ್ಜಿಗರು.com (೨3.೦೬.೧೨)

ದೇವಲೋಕದಲ್ಲಿ ಕಿಕ್ಕಿರಿದ ಸುರ ಸಂದಣಿ..ಎತ್ತ ನೋಡಿದರು ಗುಜು ಗುಜು ಸದ್ದು...

ಇಂದ್ರ ...."ದೇವಾನುದೇವತೆಗಳೇ..ಏನಿದು ಸದ್ದು..ಯಾಕೆ ಈ ತಲ್ಲಣ...ಯಾಕೆ ಏನಾಯಿತು...?"

"ಇಂದ್ರ...ನಿನಗೆ ತಿಳಿಯದ್ದು  ಏನಿದೆ..ನಾವೆಲ್ಲರೂ ತಲ್ಲಣಗೊಂಡಿರುವುದು "ಬಜ್ಜಿಗರು" ಗುಂಪು ಮತ್ತೆ ಹೊಸ ಪ್ರವಾಸಕ್ಕೆ ಹೊರಟಿದೆ..ಅವರು ಹೊರಟರೆಂದರೆ..ವಿಷಯಕ್ಕೆ ಕೊರತೆಯೇ ಇಲ್ಲ..ಎಲ್ಲಾ  ಲೋಕಗಳ ವಿಷಯ, ಅಣಕು, ಚರ್ಚೆ ಎಲ್ಲವು ನಡೆಯುತ್ತೆ..ಎಲ್ಲಿ ನಮ್ಮ ಬಂಡವಾಳವನ್ನೆಲ್ಲ  ಒಬ್ಬಟ್ಟಿನ ಹೂರಣದ ಹಾಗೆ ಹೊರಗೆ ತೆಗೆಯುತ್ತಾರೆ ಎನ್ನುವ ಭಯ ಕಾಡುತ್ತಿದೆ...!!!"

"ಓಹ್ ಹಾಗೋ..ಇರಲಿ ಬಿಡಿ..ನಮ್ಮ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆ ಮುಂತಾದ ಅಪ್ಸರೆಯರು ಇದ್ದಾರೆ  ಬಿಡಿ.."

"ಇಲ್ಲ...ಇಂದ್ರ ಅವರೆಲ್ಲ ಸರಸ್ವತಿ ಪುತ್ರರು..ವಿದ್ಯೆ,  ಬುದ್ದಿ, ಇವೆರಡಕ್ಕೆ ಅವರು ಬೆರಗಾಗೋದು..ಬೇರೆಯಾವುದು ನಡೆಯೋಲ್ಲ.."

"ಇರಲಿ..ಇವತ್ತು ನೋಡೋಣ..ಮುಂಜಾಗೃತೆಗೆ ನಾನು ವಾಯುವನ್ನು ಕಲಿಸಿರುತ್ತೇನೆ..ಅವನು ತಂಪಾಗಿ ಗಾಳಿ ಬೀಸುತ್ತ..ಅವರ ಪ್ರವಾಸ ಪ್ರಯಾಸವಾಗದಂತೆ ನೋಡಿಕೊಳ್ಳುತ್ತಾನೆ..ಅವರ ತಲೆ ಬಿಸಿ ಆಗದಿದ್ದರೆ..ನಮಗೆ ತಲೆ ಬಿಸಿ ಮಾಡೋಲ್ಲ.....ಸರಿ ಎಲ್ಲರು ಅವರ ಪ್ರವಾಸವನ್ನು ನೋಡಿರಿ...ಹಾಗೂ ನಡೆಯುವ ವಿದ್ಯಮಾನವನ್ನು ನೋಡಿ ನನಗೆ ತಿಳಿಸಿ"

"ನೀವೇನ ಶ್ರೀಕಾಂತ್ ಮಂಜುನಾಥ್"
"ಹೌದು...ನಮಸ್ಕಾರ..ನೀವು ಶಿವೂ ಅಲ್ವ..."
"ಹೌದು..ಬನ್ನಿ ಗಾಡಿ ಅಲ್ಲಿ ನಿಂತಿದೆ..."
ಅಪಾರ ಪ್ರತಿಭೆಯ ಹಾಗೂ ವಾಕ್ ಚಾತುರ್ಯದ ಶಿವೂ ವಾಹನದ ಬಳಿ ನಮ್ಮನ್ನು  ಕರೆದೊಯ್ದರು 

ಒಳಗೆ ಬಂದಾಗ ಒಂದು ಸುಂದರ ನವ ಜೋಡಿ ಶಿವ ಪ್ರಕಾಶ್ (ಚಿಕ್ಕ ಸುಂದರ ಗಿರಿಜಾ ಮೀಸೆ ಹಾಗೂ ಮೋಹಕ ನಗು )..ಮತ್ತು ಅವರ "ಮನದನ್ನೆ" ನಂದಿನಿ ನಸುನಗುತ್ತ ಸ್ವಾಗತಿಸಿದರು.

ಇಲ್ಲಿಂದ ಸೀದಾ ನಿರ್ಮಲ ಸ್ಟೋರ್'ಸ್ ಹತ್ತಿರ ನಮ್ಮ ಉತ್ತರ ಕರ್ನಾಟಕದ ಬಹುಮುಖ ಪ್ರತಿಭೆ ಉಮೇಶ್ ದೇಸಾಯಿ ಹಾಗು ಅವರ ಕುಟುಂಬ ಚೈತನ್ಯ ರಥವನ್ನ ಏರಿದರು ..ಅಲ್ಲಿಂದ ಸೀದಾ ಬನಶಂಕರಿಗೆ ದೌಡಾಯಿಸಿತು ...ನಮ್ಮ ಬಸ್.. 

ಅಲ್ಲಿ "ಪ್ರವಾಸದ ಉತ್ಸಾಹದ ಟಾನಿಕ್" ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ, ಸುಂದರ ಮಾಸ್ತರು ನವೀನ, "ಭೀಮ ಹಾಗೂ ನಿಶ್ಯಬ್ಧ ಹಾಡಿನ ಕಲಾವಿದ" ಮಹೇಶ್, "ಸುಂದರ ಅವಳಿಗಳು" "೬- ಪ್ಯಾಕೆಟ್ ಸುದೇಶ್"  ಹಾಗು "ಒಳ್ಳೆಯ ಬಳ್ಳಿ" ಸುಲತಾ, ಚೆಲುವ  ಬ್ರಹ್ಮಚಾರಿ ಗಿರೀಶ್, "ಉಟ್ ಜಾ ಬೇಟಾ  ನಹಿ ತೋ ಜ್ಯೋತಿ ಕ್ಯಾಮೆರ ಲೆಖೆ ಆಯೆಗಿ" ಖ್ಯಾತಿಯ ಜ್ಯೋತಿ ಮತ್ತು ಕುಟುಂಬ,  ಗಡಿನಾಡಿನ ನಗುಮೊಗ ಹಾಗೂ ಬಹುಮುಖ ಪ್ರತಿಭೆಯ ಆಜಾದ್...ವಿಕಿಪೀಡಿಯದ ದೈತ್ಯ ಪ್ರತಿಭೆ ಶಿವೂ ಹಾಗು ಕುಟುಂಬ ...ಇವರೆಲ್ಲರೂ ನಗುನಗುತ ಎಲ್ಲರೂ   ಹಲ್ಲು ಬೀರುವಂತೆ ಮಾಡಿ ನಗೆ ಬುಗ್ಗೆಯ ಕಾರಂಜಿಯನ್ನು "ಆನ್" ಮಾಡಿದರು...

ದೇವಗೌಡ ಪೆಟ್ರೋಲ್ ಬಂಕ್ ಹತ್ತಿರ ಮುಂಜಾನೆಯಲ್ಲೇ ಅಂಗಳದಲ್ಲಿ ರಂಗವಲ್ಲಿ ಹಾಕುವ ಸಂಧ್ಯಾ ಬಸ್ಸಿನ ಅಂಗಳಕ್ಕೆ ದಾಂಗುಡಿ ಇಟ್ಟರು...

ಇನ್ನೇನು ಮೈಸೂರು  ಹೆದ್ದಾರಿಗೆ ವಾಹನ ಬಂತು..ಅಷ್ಟರಲ್ಲೇ  ಬೆಳದಿಂಗಳ ನಗೆ ಚೆಲ್ಲುವ ರೂಪ ಮತ್ತು ಕುಟುಂಬ ಕೈ ಬೀಸಿದಾಗ ನಿಂತ ಬಸ್ಸಿನಲ್ಲಿ                                       ಆಸೀನರಾಗುತ್ತಾರೆ...

ಅರೆ ಎಲ್ಲ ಬಂದರು..ಆದ್ರೆ ಎಲ್ಲರನ್ನು "ಆಡಿಸಿ ನೋಡು...ಕುಣಿಸಿ ನೋಡು...ದಣಿವು ಬಾರದು"  ಎಂದು , ನಗಿಸಿ, ಕುಣಿಸಿ,  ಮನ ತಣಿಸುವ ಗುರು ಕೆಂಗೇರಿ ಬಳಿ ತಮ್ಮ ಸಲಕರಣೆಗಳೊಂದಿಗೆ ಬರುತ್ತಾರೆ ಅನ್ನುವ ವಿಷಯ ತಿಳಿದು ಎಲ್ಲರ ಉಭಯ ಕುಶೋಲೋಪರಿ ಸಾಂಪ್ರತ ಅವರು ಬಂದ ಮೇಲೆಯೇ ಎಂದು ಒಮ್ಮತದ  ನಿರ್ಧಾರ ಮಾಡಿದೇವು.. 

"ಅಗೋ ಗುರು ಬಂದರು..."

ಅಬ್ಬ...ಈಗ ಶುರು...ನಗೆ ಚಟಾಕಿ ಅಲ್ಲಲ್ಲ ನಗೆ ಬಾಂಬಿನ ಸರಮಾಲೆ...

ಒಬ್ಬರಾದ ಮೇಲೆ ಒಬ್ಬರು....ಆರತಕ್ಷತೆಯಲ್ಲಿ ನಿಂತ ವಧು-ವರರಂತೆ..ತಮ್ಮ ಬಗ್ಗೆ ಹೇಳಲು ಸಂಕೋಚ ಪಡುತ್ತ..ಹಿತ ಮಿತವಾಗಿ ಅವರ ಪರಿಚಯ ಮಾಡಿಕೊಂಡರು...

ಮಹೇಶ್ .."ಬಿಡದಿ ತಟ್ಟೆ ಇಡ್ಲಿ..ತಟ್ಟೆ ಇಡ್ಲಿ.ಬಂತು...ಹುರ್ರಾ " 
ಎಲ್ಲರರೂ  ಒಂದೆರಡು ತಟ್ಟೆ ಇಡ್ಲಿ ಹೊಡೆದ ಮೇಲೆ....ಮತ್ತೆ ಪರಿಚಯದ ಕಾರ್ಯಕ್ರಮ ಚಾಲನೆ ಶುರುವಾಯಿತು...

ಮದ್ದೂರ್ ತಿಫ್ಫ್ಯಾನಿಸ್ ಬರುವ ಹೊತ್ತಿಗೆ ಎಲ್ಲರ ಹೊಟ್ಟೆ, ತಲೆ, ಹಾಗು ಮನಸು ತುಂಬಿತು..ಎಲ್ಲರು ಗುಟುಕು ಕಾಫಿಯನ್ನು ಹೀರುತ್ತಾ ಪರಿಚಯವನ್ನು ಚಿರಪರಿಚಯವನ್ನಾಗಿ ಮಾರ್ಪಾಡಿಸಿದರು...

ಅಂತ್ಯಾಕ್ಷರಿ ಹೊಸ ಮುಖಗಳನ್ನು ಹಾಗೂ ಹಳೆ ಮುಖಗಳನ್ನು  ಜೊತೆಮಾಡಿತು...ಬತ್ತಳಿಕೆಯಲ್ಲಿ ಇದ್ದ ಹಾಡುಗಳು ಹೊರ ಬರಲು ಶುರುವಾಯಿತು..
ಯಾಕೋ ಮುಖವನ್ನು ಹೊರಗೆ ಹಾಕಿ ಇಣುಕಿ ನೋಡಿದಾಗ..ಪ್ರಕಾಶಣ್ಣ  "ಬಾಬು ರಾಯನ ಕೊಪ್ಪಲು ಬಂತು...ಬಾಲಣ್ಣ ಇಲ್ಲೇ ತಮ್ಮ ತುಂಟ ಕ್ಯಾಮೆರಾದ ಜೊತೆ ನಿಂತಿರುತ್ತಾರೆ..."

"ನಗುಮುಖದ ನಡೆದಾಡುವ ಇತಿಹಾಸ ಕೈಪಿಡಿ" ಬಾಲು ಸರ್.. ಅವರಷ್ಟೇ ನಗುಮೊಗದ ಕ್ಯಾಮೆರ ಜೊತೆಗೆ ಒಳಗೆ ಬಂದರು..ಅವರ ಬಗ್ಗೆ ಪ್ರಕಾಶಣ್ಣ ಚಿಕ್ಕದಾದ ಚೊಕ್ಕದಾದ ಮಾಹಿತಿ ಕೊಟ್ಟು..ಅವರ ಹಿರಿಮೆ ಹೇಳಿದರು.. 
.
ಬಾಲು ಸರ್..ಇತಿಹಾಸ ಪುಟವನ್ನು ಚಿಕ್ಕದಾಗಿ ಮಡಚುತ್ತ...ಕರಿ ಬೆಟ್ಟದ ಹಾಗು ಅದರ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೇಳುತ್ತಾ ಇದ್ದಂತೆ....ವಾಹನದಲ್ಲಿದ್ದ ಎಲ್ಲರು ಮಂತ್ರ ಮುಗ್ಧರಾಗಿ  ಅವರ ಮಾತುಗಳನ್ನ ಕೇಳಿಸಿಕೊಳ್ಳುತ್ತಾ ಮನಸಾರೆ ಅವರಿಗೆ ವಂದಿಸಿದೆವು..

ಅಗೋ ಅಲ್ಲಿ "ಸತೀಶಣ್ಣ..." ಕ್ಯಾಮೆರ ಕೈಯಲ್ಲಿ ಇಲ್ಲದಿದ್ದಾಗ ಜ್ಯೋತಿ ಜೋರಾಗಿ ಕೂಗಿದರು..."ಶತಮಾನದ ವೀರ ಕನ್ನಡಿಗ" ಸತೀಶ್ ಎಲ್ಲರಿಗೂ ಕೈ ಕುಲುಕಿ...ದೇವಸ್ಥಾನಕ್ಕೆ ನಮ್ಮನೆಲ್ಲ ಬಾಲು ಸರ್ ಜೊತೆ ಕರೆದೊಯ್ದರು...

ವೆಂಕಟರಮಣ ಸುಂದರ ಮೂರ್ತಿ ನಮ್ಮನ್ನೆಲ್ಲ  ನಗುಮೊಗದೊಂದಿಗೆ ಹರಸಿತು....ಮದುವೆಯಾದ ಅನೇಕರು ತಮ್ಮ ಸಹ-ಧರ್ಮಿಣಿಯ ಜೊತೆ ಬಂದಿದ್ದರಿಂದ ದೇವರ ಮಂಗಾಳಾರತೀಯೇ  ಮೊದಲನೆಯದಾಗಿದ್ದ ಕಾರಣ ಖುಷಿಯಿಂದ ತಮ್ಮ ತಮ್ಮ ಹರಕೆಗಳನ್ನು ಸಲ್ಲಿಸಿ ಹೊರಗೆ ಬಂದಾಗ...ಭೋಜನ ವಿರಾಮದ ಫಲಕ ಕೂಗುತಿತ್ತು...
ಸುಖವಾದ ಭೋಜನ..ರುಚಿ ರುಚಿಯಾದ ಅಡುಗೆ..."ಇಲ್ಲೇ ಒಂದು ಮರದ ಕೆಳಗೆ ಮಲಗಿ ಬಿಟ್ಟರೆ" ನವೀನ-ಗಿರೀಶರ ಮಾತು ಇನ್ನು ಮುಗಿದಿರಲಿಲ್ಲ...

ಅಷ್ಟರಲ್ಲೇ ಪ್ರಕಾಶಣ್ಣ "ಯಾರಪ್ಪ ಅದು...ಜಯ ವಿಜಯ ಇರುವಾಗ...ಅದು ಸಾಧ್ಯವಿಲ್ಲ...ಏನಪ್ಪಾ ಮಹೇಶಪ್ಪ...?" 

"ಮತ್ತೆ ಅಣ್ಣ...ಸಾಧ್ಯವೇ ಇಲ್ಲ..." 

ಅರೆ ಯಾರದು....ಚಂಡಾಮಠದ ಸ್ವಾಮೀಜಿಗಳು ಸಿದ್ಧವಾದರು .ರಂಗೀಲದ  ಧಿರಿಸಿನಲ್ಲಿ...ಕಾಗೆಯನ್ನು ನಾಚಿಸುವಷ್ಟು ಕಪ್ಪಾದ ಕನ್ನಡಕ..ಯಾವುದೋ ದೇಶದ  ದ್ವಜ ನೆನಪಿಗೆ ತರಿಸುವ ತಲೆಗೆ ರುಮಾಲು, "ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ" ಅಣ್ಣಾವ್ರು ಹೇಳಿದ ರೀತಿಯಲ್ಲೇ ಇದ್ದ ಮಲ್ಲಿಗೆ ಹೂವಿನ ಎಸಳುಗಳು ಎರಡು ಕಿವಿಯಲ್ಲಿ ರಾರಾಜಿಸುತಿದ್ದವು..."ಗಿರಿ  ನವಿಲು ಎಲ್ಲೋ...ಅದರ ಗರಿ ಎಲ್ಲೋ" ಅಂತ ಹುಡುಕಿ ಹುಡುಕಿ ಕಡೆಗೆ ನವಿಲಿನ ಗರಿ ಸಿಗದೇ  ಗಿಡದ ಎಲೆಗಳನ್ನೇ ಸಿಕ್ಕಿಸಿಕೊಂಡು...ತಮ್ಮ ಭವಿಷ್ಯವೇ ಒಂದು ಎರಡು ಎಣಿಸಲು ಸಿದ್ದವಾಗಿದ್ದರೂ...ಇತರರಿಗೆ ಭವಿಷ್ಯ ಪೇಳಲು ಸಿದ್ದವಾಗಿದ್ದರು ನಮ್ಮ ಅಭಿನವ ಚಂಡಾನಂದ ಸ್ವಾಮೀಜಿ...!!!!

ತರಲೆ ಪ್ರಶ್ನೆಗಳು, ತರಲೆ ಉತ್ತರಗಳು, ಯಾವ ಪ್ರಶ್ನೆಗೂ ಬರಿ ೩೨ ಹಲ್ಲು ತೋರಿಸದೆ ಸಮರ್ಪಕ, ಸಮಂಜಸ, ಹಾಸ್ಯ ಮಿಶ್ರಿತ ಉತ್ತರಗಳನ್ನು ಬಿತ್ತರಿಸಿ, ಪ್ರತಿಯೊಂದು ಉತ್ತರವನ್ನು ವ್ಯಾಕರಣದ ಸಂಧಿಯಂತೆ ಬಿಡಿಸಿ ಬಿಡಿಸಿ ಅರ್ಥೈಸಿದ ಜೆ.ಜೆ. (ಜ್ಯೋತಿಷ್ಯ ಜಾಕಿ ) ಬಾಲು ಸರ್ ಅವರಿಗೆ ನಮ್ಮ ಅಭಿನಂದನೆಗಳು   

ಶಿವೂ ತಮ್ಮ ಬತ್ತಳಿಕೆಯಿಂದ ಒಂದು ಅಮೋಘ ಆಟ ತೆಗೆದರು...ಮದುವೇ ಎಲ್ಲರ ಜೀವನದಲ್ಲಿ ಅವರವರ ಹಣೆಯಲ್ಲಿ ಬರೆದಿರುತ್ತದೆ...ಆದ್ರೆ ಬರೆದ ಹಣೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಜೀವನದ ಚಂಡಿನಲ್ಲಿ ಪ್ರೀತಿಯ ಆಸರೆಯಲ್ಲಿ "ನಲಿಯುತ ಹೃದಯ ಹಾಡನು ಹಾಡಿದೆ.." ಅಂತ ಹೇಳಿಸುವ ಒಂದು ಸುಂದರ ಆಟವನ್ನು ಆಡಿಸಿದರು...ಶಿವೂ ನಿಮ್ಮ ಕ್ರಿಯಾ ಶೀಲತೆಗೆ  ಒಂದು ಸಲ್ಯೂಟ್...ಅದರ ಕೆಲವು ಚಿತ್ರಗಳು...ನಿಮಗಾಗಿ....













"ಗುರು ಬಂದರು..ಹೊಸ ಆಟ ತಂದರು..ಆಟದಿಂದಲೇ ತಂಡದ ಸ್ವಾಸ್ಥ್ಯ ಎಂದರು..."  ಶಾಂತಿ ಇಂದಲೇ  ಕ್ರಾಂತಿಕಾರಕ ಕೆಲಸ ಮಾಡಬಹುದು ಎಂದು ಸೂಚ್ಯವಾಗಿ ತೋರಿಸಿದ ಆಟದಲ್ಲಿ ಎಲ್ಲರೂ  ವಿಜಯಿಗಳೇ...ಗುರು ನಿಮಗೆ  ಹಾಗೂ ನಿಮ್ಮ ತಂಡಕ್ಕೆ ನಮನಗಳು... 

"ಸರ್...ಸರ್...ಕಾಫೀ, ಪಕೋಡ...."...ಒಹ್..ಬನ್ನಿ..ಆಗಲೇ ತುಂಬಾ ಹೊತ್ತಾಗಿದೆ...ಹೊಟ್ಟೆಗೆ ಬಿಸಿ ಬಿಸಿ ಕಾಫಿ..ಹಾಗೂ ಪಕೋಡ ಇಳಿಸೋಣ ಅಂದಿದ್ದೆ...ಒಬ್ಬೊಬ್ಬರಾಗಿ ಬಿಸಿ ಬಿಸಿ ಬ್ರೇಕ್ ನ ಲಾಭ ಪಡೆದು..ಎಲ್ಲರು ಉದರಕ್ಕೆ ಒಂದು ಸಣ್ಣ ಹೊದ್ದಿಕೆಯನ್ನ ಹೊದೆಸಿದರು...

ಯಾಕೋ ಸುಮ್ಮನೆ ಹಾಗೆ ಕೈ ಗಡಿಯಾರ ನೋಡಿದಾಗ ಚಿಕ್ಕ ಮುಳ್ಳು ಪಾಂಡವರ ಸಂಖ್ಯೆಯನ್ನ ತೋರಿಸುತಿತ್ತು..ಎಲ್ಲರಿಗೂ ಮನೆ ಸೇರುವ ತವಕ....ಮೈಸೂರು  ಬೆಂಗಳೂರು ಹೆದ್ದಾರಿಯಲ್ಲಿ ಬಾಣಲೆಯಲ್ಲಿ ಇರುವ ಬೋಂಡದ ಹಾಗೆ ಒಬ್ಬರ ಒಬ್ಬರ ಮೇಲೆ ಬೀಳಲು ತುದಿಗಾಲಲ್ಲಿ ನಿಂತಿರುವಂತೆ ವಾಹನ ದಟ್ಟಣೆ  ಇರುವುದರಿಂದ ಬೇಗನೆ ಹೊರಡುವ ತಯಾರಿ ಶುರುವಾಯಿತು..

ಕಡೆಯ ಸಮಾರೋಪ ಸಮಾರಂಭ..ಪ್ರಕಾಶಣ್ಣ..ಬಾಲು ಸರ್, ಆಜಾದು ಸರ್ ಶುರು ಮಾಡಿದರು..ಎಲ್ಲರಿಗೂ ಒಂದು ತೆರನಾದ ಉಡುಗೊರೆಯ ಪೊಟ್ಟಣ  ಕಾದಿತ್ತು..

ತಮಾಷೆ, ನಗು, ಕೀಟಲೆ, ಕಿಚಾಯಿಸುವ ಪರಂಪರೆ ಇನ್ನೇನು ಮುಗಿಯುವ ಹಂತಕ್ಕೆ ಬಂದಿತ್ತು..

ಎಲ್ಲರೂ ಭಾರವಾದ ಮನಸಿನಿಂದ "ಯಾಕಪ್ಪ ಇಷ್ಟು ಬೇಗ ಈ ಪ್ರವಾಸ ಮುಗಿಯ ಹತ್ತಿತು..ಸೂರ್ಯ ಇನ್ನೊಂದೆರಡು ತಾಸು ಇದ್ದಿದ್ದರೆ ಏನು ಆಗುತಿತ್ತು ಎನ್ನುವ ಯೋಚನೆ, ಆಲೋಚನೆ..."

"ಸಾಗುವ ಕಾಲದ ಗಾಲಿಯ ಹಿಂದೆ ಸೂರ್ಯನು ಸುಮ್ಮನೆ ನಡೆದಿದ್ದ ..ಆಗು ಹೋಗುಗಳ ಪರಿವೆ ಇಲ್ಲದೆ ಆಗಸದಲ್ಲಿ ಸೂರ್ಯ ಮುಳುಗಿದ್ದ"  ಅಂತ ಸೂರ್ಯ ತನ್ನ ಮನೆಕಡೆಗೆ ಹೊರಟಿದ್ದ..ಹಾಗೆಯೇ ನಮ್ಮ ಸುಂದರ ಪ್ರವಾಸವು ಕರಿ ಘಟ್ಟದಲ್ಲಿ ಕೊನೆ ಘಟ್ಟಕ್ಕೆ ಬಂದು ನಿಂತಿತ್ತು..

ಎಂತಹ ಸುಂದರ ಲೋಕ ಈ ಬಜ್ಜಿಗರದು..."ವಾಹ್ ವಾಹ್ ವೆಂಕಿಜಿ....ಜೋಡಿ ಕ್ಯಾ ಬನಾದಿ....ಬಜ್ಜಿಗರು ಗ್ರೂಪ್ ಕೋ...ಬದಾಹಿ ಹೋ ಬದಾಹಿ..ಸಬ್ ರಸಮೊಂಕಿ ಬಡಿ ಹೇ ಜಗ ಮೇ  ದೋಸ್ತ್ ಕೋ ದೋಸ್ತ್ಹೊಂಸೆ ಮಿಲಾಯೀ."..ಎಂದು ಹೇಳುತ್ತಾ ವೆಂಕಟರಮಣನಿಗೆ ಒಂದು ನಮಸ್ಕಾರ ಸಲ್ಲಿಸಿದೆವು...

ದೇವೇಂದ್ರ ಸಮಾಧಾನದ ಉಸಿರು ಬಿಡುತ್ತಾ.."ಅಬ್ಬ ಎಲ್ಲೂ ನಮಗೆ ತೊಂದರೆ ಕೊಡದೆ ಸುಂದರ ಕ್ಷಣಗಳನ್ನು ಕಳೆದ ಬಜ್ಜಿಗರು ಗುಂಪಿಗೆ ನನ್ನ ಶುಭಾಶಯಗಳು...ಹೀಗೆ ಬರುತಿರಿ..ಸಂತಸದಿಂದಿರಿ...ಶುಭ ವಾರಾಂತ್ಯ...."

ಸಕತ್ ಮೇಲೆ ದೀಪಗಳು  : (high -lights )
೧. ಒಂದು ಸುಂದರ ಗುಂಪು..
೨. ಪ್ರತಿಯೊಬ್ಬರೂ ಒಬ್ಬರಿಗೂಬ್ಬರು ಸ್ಪಂದಿಸುವಿಕೆಯ ಗುಣ 
೩. ನಮ್ಮ ಪ್ರಪಂಚದಲ್ಲಿ ನಾವು ರಾಜರೆ ಆಗಿದ್ದರು..ಹೊರಗೆ ಬಂದು    ನಿಂತಾಗ..ಎಲ್ಲರೊಳು ಒಬ್ಬರಾಗಿ ನಿಲ್ಲುವುದು..
೪. ಪ್ರವಾಸವನ್ನು ಪ್ರಯಾಸವಾಗದೆ ಇರುವ ನಿಟ್ಟಿನಲ್ಲಿ ಆಯೋಜಿಸಿದ ಎಲ್ಲರಿಗು ನನ್ನ 
ನಮನಗಳು...
೫. ಇದು ಬಜ್ಜಿಗರ ಜೊತೆ ಮೊದಲನೆಯದು..."ಆರಂಭಗಾರ ಯಾವಾಗಲು ಇಂತಹ 
ಮಮತೆಯನ್ನು ತುಂಬಿಕೊಂಡಿರಬೇಕು...." ಇಂತಹ ಮಮಕಾರದ ಮೂರ್ತಿಗಳು    
ತುಂಬಿರುವ ಈ ತಂಡದ ಜೊತೆ ಇದ್ದಾಗ ಯುಗಗಳು ಕ್ಷಣದಂತೆ...."  ನನ್ನ   
ಮೊದಲನೆಯ ಪ್ರವಾಸ ಅನ್ನುವ ಸಂಕೋಚ..."ನಾಚಿಕೆ ಇನ್ನೇಕೆ ಅಂಜಿಕೆ ಇನ್ನೇಕೆ 
ನಾನಿಲ್ಲಿ ಇರುವಾಗ" ಎಂದು ಹೇಳುತ್ತಾ ದೃಷ್ಟಾಂತ ಪಡಿಸಿದವರು ಪ್ರಕಾಶಣ್ಣ 
ಹಾಗು ತಂಡ.